Saturday, July 25, 2020

ಕಲಿವಿನ ಫಲ

ಕಲಿಕೆ ಎಂಬುದು ಸಹಜ ಪ್ರಕ್ರಿಯೆ ಎಂಬ ಮಾತುಗಳುಎಲ್ಲೆಡೆಯೂ ಕೇಳುತ್ತೆವೆಮನುಷ್ಯ ಹುಟ್ಟಿನಿಂದಚಟ್ಟದವರೆಗೂ ಕಲಿಯುತ್ತಲೆ ಅನೇಕ ಹೊಸ ಹೊಸಅನುಭವಗಳು ಪಡೆಯುತ್ತಿರುತ್ತಾನೆಹಾಗಾದರೇಕಲಿಯುವುದು ಅಷ್ಟೊಂದು ಸುಲಭವೇಎಂಬ ಪ್ರಶ್ನೆ ನಮ್ಮಮನದಲ್ಲಿ ಮೂಡಿದಾಗ ನಾವು ಸಹಜವಾಗಿ ಉತ್ತರಿಸಲುತಡವರಿಸುತ್ತೆವೆಅಂದಂತೆ ಕಲಿಕೆ ಕಲಿಯಕ್ಕಾಗದಷ್ಟುಹೆಮ್ಮರವಲ್ಲಜೊತೆಗೆ ಹಗುರವಾಗಿ ಸ್ವೀಕರಿಸಿದವರಿಗೆಸುಲಭವೂ ಕೂಡ ಅಲ್ಲ ಎಂಬುದು ಹೇಳುವ ಚಿಕ್ಕ ಪ್ರಯತ್ನ ಲೇಖನದಲ್ಲಿ ಮಾಡಿರುವೆ.

ನಾನು ಒಬ್ಬ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದು,ಪ್ರಸ್ತುತ ಬೀದರ್ ಜಿಲ್ಲೆಯ ಗಡಿ ತಾಲೂಕು ಔರಾದನಲ್ಲಿ ಕ್ಷೇತ್ರಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿರುವೆಎಲ್ಲೆಡೆ ಕೋವಿಡ್-19 ಕಾರ್ಮೋಡ ಆವರಿಸಿಕೊಂಡ ಪ್ರಯುಕ್ತಶಾಲಾ ಪ್ರಾರಂಭಮಕ್ಕಳ ಕಲಿಕೆ ಸೇರಿದಂತೆ ಹತ್ತಾರುಪ್ರಶ್ನೆಗಳು ಎನಗೆ ಕಾಡಲಾರಂಭಿಸಿರುವುದಂತೂ ನಿಜ.ಆದರೇ ಮಕ್ಕಳ ಕಲಿಕೆಗೆ ನಾನು ಮಾಡುವುದಾದರೂ ಏನು?ಶಾಲೆಗಳು ಆರಂಭವಾಗದೇ ಮಕ್ಕಳಿಗೆ ಕಲಿಸುವುದಾದರೂಹೇಗೆಹೀಗೆ ಹತ್ತಾರು ಪ್ರಶ್ನೆಗಳು ಕಾಡುತ್ತಲಿದ್ದುಅವುಗಳಪರಿಹಾರಕ್ಕಾಗಿ ಸಮರ್ಪಕ ದಾರಿ ಹುಡುಕಬೇಕಿರುವುದುಈಗೀನ ಅನಿವಾರ್ಯ ಎಂದು ಭಾವಿಸಿದ್ದೆ.

Educational Websites for Kids - Bark

ಇದರ ಮಧ್ಯೆದಲ್ಲಿ ಆಯುಕ್ತಾಲಯಸಾರ್ವಜನಿಕ ಶಿಕ್ಷಣಇಲಾಖೆ ಕಲಬುರ್ಗಿ ವತಿಯಿಂದ ಒಂದು ಅದ್ಭುತವಾದಯೋಜನೆ ಹಾಕಿಕೊಂಡು ಪ್ರತಿ ಶಿಕ್ಷಕರಿಗೂ ನಿರ್ದೀಷ್ಟವಾದಟಾಸ್ಕ್  ನೀಡಿಪ್ರತಿಯೊರ್ವ ಶಿಕ್ಷಕ ತನ್ನ ಶಾಲೆಗೆಶಾಲಾ ಮಕ್ಕಳಿಗೆ ತಕ್ಕಂತೆ Student Profile, School Development Plan, Case Study, Book Review, Article on Education, Exposure to the latest e-learning ಹೀಗೆ ಆರು ವಿಷಯಗಳಿಗೆಸಂಬಂಧಿಸಿದಂತೆ ಕೆಲಸ ನಿರ್ವಹಿಸುವಂತೆ ತಿಳಿಸಲಾಯಿತು.ಕೆಲಸ ನೀಡಿದ ತಕ್ಷಣ ಅದೆಷ್ಟೋ ಶಿಕ್ಷಕರು  ಕೆಲಸದಿಂದಬೇಸರವಾಗಿ ನನಗೆ ಕರೆ ಮಾಡಿದ್ದು ಉಂಟುಇನ್ನುಅದೆಷ್ಟೋ ಶಿಕ್ಷಕರು  ನೆಪದಲ್ಲಿ ಕನಿಷ್ಟ ಒಂದಿಷ್ಟುಪುಸ್ತಕಗಳು ಓದಲು ಅವಕಾಶ ದೊರೆತಂತಾಯಿತು ಎಂಬಸಮಾಧಾನವು ಕೂಡ ವ್ಯಕ್ತಪಡಿಸಿದ್ದು ಕಂಡೆ.

ಇದಕ್ಕೆ ಪೂರಕವಾಗಿ ಅನೇಕ ಶಿಕ್ಷಕರು ತಮಗೆ ವಹಿಸಿದಕೆಲಸಗಳು ಇಷ್ಟದಿಂದಲೋ ಅಥವಾ ಕಷ್ಟದಿಂದಲೋಮಾಡಿರುವುದು ಕಂಡು ಬಂತಾದರೂ ಇದರಿಂದ ಶಿಕ್ಷಕರಮೂಲ ಕೆಲಸಕ್ಕೆ ಅಣಿಯಾಗಿಸಿ ಪ್ರೇರಣೆ ಜ್ಯೋತಿ ಬೆಳಗಿದಇಲಾಖೆಯ ನಡೆ ಅವಿಸ್ಮರಣೀಯಇಷ್ಟಕ್ಕೆ ಮುಗಿತುಎನ್ನುವಷ್ಟರಲ್ಲಿಯೇ ಶುರುವಾಯ್ತು ಮತ್ತೊಂದು ತಳಮಳ.ಅದೇನಂತಿರಾಕೊರೋನಾ ಮಹಾಮಾರಿಯಅಟ್ಟಹಾಸದಿಂದ ಶಾಲಾ ಪ್ರಾರಂಭಕ್ಕೆ ವಿಘ್ನ ಎಂಬ ಸಂದೇಶ.

ಕಳೆದ ಜನವರಿಯಿಂದಲೇ ದೇಶದಲ್ಲಿ ಪ್ರವೇಶಿಸಿದ ಕೊರೋನಾ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಸಾಗಿರುವುದರಿಂದ ಶಾಲೆಗಳು ಆರಂಭವಾಗಿಲ್ಲದಿರುವುದು ಕಂಡು ಕಲಬುರಗಿ ಆಯುಕ್ತಾಲಯ ಮತ್ತೊಂದು ಸಾಹಸಕ್ಕೆಕೈ ಹಾಕಿತ್ತುಪ್ರಾರಂಭದಲ್ಲಿ ನಲಿ-ಕಲಿ ಶಿಕ್ಷಕರಿಗಾಗಿಆರಂಭಿಸಿದ ವೆಬಿನಾರ್ ತರಬೇತಿ ಇಂದು ಶಿಕ್ಷಕಸಮೂಹವನ್ನೇ ಮುನ್ನೆಲೆಗೆ ತಂದಿರುವುದು ಅಕ್ಷರಶಃಸತ್ಯವಾದ ಮಾತು.

ಮಾನ್ಯ ಅಪರ ಆಯುಕ್ತರುನಿರ್ದೇಶಕರು,ಉಪನಿರ್ದೇಶಕರು(ಯೋಜನೆಸೇರಿದಂತೆ ಹತ್ತಾರುಅಧಿಕಾರಿ ವರ್ಗದವರು ಸೇರಿಕೊಂಡು ಕರ್ನಾಟಕ ಸೇರಿದಂತೆಇನ್ನಿತರ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಮಾದರಿ ಎನ್ನುವಂತೆ ಮೇಅಂತ್ಯಕ್ಕೆ ಅಂದಾಜು ಕಲಬುರ್ಗಿ ವಿಭಾಗದ ವಿವಿಧಜಿಲ್ಲೆಗಳಾದ ಬೀದರಕಲಬುರ್ಗಿಬಳ್ಳಾರಿಯಾದಗಿರಿ,ಕೊಪ್ಪಳ ಮತ್ತು ರಾಯಚೂರಿನ ಸುಮಾರು 22 ಸಾವಿರಶಿಕ್ಷಕರಿಗೆ ಇಲಾಖೆಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಾಗದೇ ತರಬೇತಿ ನೀಡಲು ಸಾಧ್ಯವಾಗಿರುವುದು ಕೊರೋನಾ ವೈರಾಣುವಿನಿಂದ ಎಂಬುದುಅಲ್ಲಗಳೆಯುವಂತಿಲ್ಲ.

ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಲೇಪ್ರತಿ ವಿಭಾಗದ (ಕಿರಿಯ, ಹಿರಿಯ ಪ್ರಾಥಮಿಕಪ್ರೌಢ)ಶಿಕ್ಷಕರಿಗೆ ಬೇಕಾದ ಅಗತ್ಯ ಪುನಶ್ಚೇತನ ತರಬೇತಿಗಳುನೀಡಿರುವುದುಪ್ರಸ್ತುತ ನೀಡುತ್ತಲಿರುವುದು ಸಮಯದಸದುಪಯೋಗ ಎನ್ನದೇ ಬೇರೆನೂ ಎನ್ನಲಾಗದುಸಂದರ್ಭದಲ್ಲಿ ನಾನು ಹತ್ತಾರು ಹೊಸ ಕೆಲಸಗಳು ಕಲಿತುಮುನ್ನಡೆದಿರುವುದು ನನ್ನ ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಯಾವತ್ತಿಗೂ ಮರೆಯಕ್ಕಾಗುವುದಿಲ್ಲ.

ವೆಬಿನಾರ್ ತರಬೇತಿಯ ಆಯೋಜನೆ :  

ವೆಬಿನಾರ್ ಎಂಬ ಪದದ ಅರ್ಥವೇ ಗೊತ್ತಿರದ ನನಗೆತಾಲೂಕಿನ ಎಲ್ಲ ಶಿಕ್ಷಕರಿಗೆ ತರಬೇತಿಯ ಆಯೋಜನೆಗೆಅಣಿಯಾಗುವಂತೆ ಮೇಲಾಧಿಕಾರಿಗಳು ಸೂಚಿಸಿದಾಗಇದೆನಪ್ಪ ಮಾಡುವುದು ಅಂತ ಭಯದಿಂದ ತಪ್ಪಿಸಿಕೊಳ್ಳಲುಪ್ರಯತ್ನಿಸಿದೆಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎಚ್.ಟಿಮಂಜುನಾಥ ಸರ್ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಶ್ರೀ ಸಂತೋಷಕುಮಾರ ಪೂಜಾರಿ ಅವರ ಧನಾತ್ಮಕಪ್ರೋತ್ಸಾಹದಿಂದ ಮೊದಲ ತರಬೇತಿ ಮಾಡಿ ಮುಗಿಸಿದೆ.

ಅಷ್ಟೋತ್ತಿಗೆ ಲಿಂಕ್ ಮೂಲಕ ತರಬೇತಿಯಲ್ಲಿಭಾಗವಹಿಸುವ ಮತ್ತು ಕೆಲ ಆನ್ಲೈನ್ ಸಭೆಗಳಿಗಾಗಿಬಳಸುವ ಆ್ಯಪ್ ಗಳ ಬಗ್ಗೆ ಮಾಹಿತಿ ದೊರೆಯಿತು.ಮುಂದುವರೆದು ಕೆಲವು ತರಬೇತಿಯಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯ ನಿರ್ವಹಣೆ ಮಾಡಿರುವ ಹಿನ್ನೆಲೆ ಹೊಸ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಯಿತು.

Here's why providing school education is not enough for your kids ...

ಶಾಲಾ ಅಭಿವೃದ್ಧಿ, ಮಕ್ಕಳ ಪ್ರಗತಿ ಸೇರಿದಂತೆ ಶಾಲೆಯ ಅನೇಕ ಕೆಲಸ ಕಾರ್ಯಗಳಿಗೆ ಇದು ಬಹು ಉಪಯೋಗಕಾರಿ. ಈ ಆ್ಯಪ್ ಮೂಲಕ ಶಾಲೆಯ ಮಕ್ಕಳ ಪಾಲಕ ಪೋಷಕರಿಗೆ ಪ್ರತಿ ತಿಂಗಳು ಸಭೆ ಕರೆದು ಮಕ್ಕಳ ಪ್ರಗತಿ ಮತ್ತು ಶಾಲಾ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸಮರ್ಥವಾಗಿ ಮಾಡಬಹುದೆಂಬುದನ್ನು ಅರಿತುಕೊಂಡೆ.

ನನ್ನ ವೈಯಕ್ತಿಕ ಜೀವನಕ್ಕೂ ಕೂಡ ತುಂಬ ಅನುಕೂಲವಾಗುವ ಈ ಆ್ಯಪ್ ಹೇಗೆ ಬಳಸಬೇಕು? ಎಂಬುದನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ತಾಲೂಕು ಸಮನ್ವಯಾಧಿಕಾರಿ ಡಾ. ಶಿವಾಜಿ ಬಿರಾದಾರ್ ಅವರಿಂದ ತಿಳಿದುಕೊಂಡೆ. ಕೇವಲ ರಾಜ್ಯವಲ್ಲದೇ ಹೊರ ರಾಜ್ಯದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಗೆ (SRP) ಅವರಿಗೂ ಕೂಡ ತಾಲೂಕು ಮಟ್ಟದ ತರಬೇತಿಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿ ಅವರಿಂದ ನಮ್ಮ ತಾಲೂಕಿನ ಶಿಕ್ಷಕರಿಗೆ ಬೋಧನೆಗೆ ಅನುಕೂಲವಾಗುವ ಅನೇಕ ವಿಚಾರಗಳು ಕೂಡ ಹಂಚಿಕೊಳ್ಳಲು ವಿನಂತಿಸಿದೆ. ಇದರಲ್ಲಿ ನಮ್ಮ ತಾಲೂಕಿನ ತೋರಣಾ ಸಮೂಹ ಸಂಪನ್ಮೂಲ ವ್ಯಕ್ತಿ ರೋಹಿದಾಸ ಮೇತ್ರೆ ಅವರ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಕೋವಿಡ್-19 ಆವರಿಸಿಕೊಂಡ ಹಿನ್ನೆಲೆ ತಾಲೂಕಿನ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಸಭೆಗಳು ಕೂಡ ಮಾಡುವಂತಿಲ್ಲ. ಅದಕ್ಕೂ ಕೂಡ ತುಂಬ ಲಾಭದಾಯಕವಾಗಿದೆ.

GOOGLE FORM ನ ಬಳಕೆ :

Google ಖಾತೆ ಹೊರತುಪಡಿಸಿ ಬೇರೆನೂ ಗೊತ್ತಿರದ ನನಗೆ ಈ ಸಂದರ್ಭದಲ್ಲಿ Google Forms ಯಾವ ರೀತಿ ಬಳಕೆಯಾಗುತ್ತದೆ ಎಂಬುದನ್ನು ಅರಿತು, ಪ್ರತಿಯೊಂದು ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುಲು ಸಾಧ್ಯವಾಗುತ್ತಿದೆ. ಅಲ್ಲದೇ ತರಬೇತಿ ನಿರತ ಶಿಕ್ಷಕರಿಗೆ MCQ ಮಾದರಿ ಪ್ರಶ್ನಾವಳಿಗಳು ರಚಿಸಿ ಪರೀಕ್ಷೆ ಕೈಗೊಳ್ಳಲು ಸಹಾಯವಾಗಿದೆ.

ಮುಂಬರುವ ಈ ಕೋವಿಡ್-19 ನಂತಹ ಭಯಾನಕ ದಿನಗಳಲ್ಲಿ ಮಕ್ಕಳಿಗೆ ಮನೆಯಿಂದಲೇ ಪರೀಕ್ಷೆಯಲ್ಲಿ ಪಾಲ್ಗೊಂಡು ಜ್ಞಾನವನ್ನು ಸಂರಚಿಸಿಕೊಳ್ಳಲು ಸಾಧ್ಯವಾಗಿಸಬಹುದು. ಅಲ್ಲದೇ ವೈಯಕ್ತಿಕವಾಗಿಯೂ ಕೂಡ ಬಳಕೆಗೆ ಬಳಸಬಹುದು ಎಂಬುದನ್ನು ಅರಿತುಕೊಂಡೆ.

ಅಲ್ಲದೇ, Whatsapp ಮೂಲಕ ಏಕಕಾಲಕ್ಕೆ ಹಲವರಿಗೆ ಸಂದೇಶಗಳು ಕಳುಹಿಸುವುದು ಹೇಗೆ?, ಹಿಂದಿ TYPEWRITING ಮಾಡುವುದು ಹೇಗೆ?, Blogger ನ ಬಳಕೆ ಮಾಡುವುದು ಹೇಗೆ?, YOUTUBE ಖಾತೆ ಬಳಸಿಕೊಳ್ಳುವುದು ಹೇಗೆ?, ಕಲಿಕೆಗೆ ಪೂರಕವಾದ ವಿಡಿಯೋ ಮತ್ತು ಆಡಿಯೋ ಮಾಡುವುದು ಹೇಗೆ?, ಕಲಿಕೋಪಕರಣಗಳು, ಪಾಠೋಪಕರಣಗಳು ತಯಾರಿಸುವುದು ಹೇಗೆ? ಹೀಗೆ ಹತ್ತಾರು ಹೊಸ ಹೊಸ ವಿಷಯಗಳು ಅರಿತು ಮುನ್ನಡೆಯಲು ತುಂಬ ಖುಷಿಯಾಗುತ್ತಿದೆ.

HRD ministry recommends using government educational portals ...

ಒಟ್ಟಾರೆ ಕೋವಿಡ್-19 ಮಾಹಾಮಾರಿ ಆವರಿಸಿಕೊಂಡ ಈ ಸಂದರ್ಭದಲ್ಲಿ ವಿಪುಲ ಅವಕಾಶಗಳು ನೀಡುವ ಮೂಲಕ ನನ್ನ ವೃತ್ತಿನೈಪುಣ್ಯತೆ ಹೆಚ್ಚಿಸಿಕೊಳ್ಳಲು ಅವಕಾಶ ಒದಗಿಸಿದ ಕಲಬುರ್ಗಿ ವಿಭಾಗದ ಮಾನ್ಯ ಆಯುಕ್ತರು, ನಿರ್ದೇಶಕರು, ಉಪನಿರ್ದೇಶಕರು (ಯೋಜನೆ), ಉಪನಿರ್ದೇಶಕರು (ಆಡಳಿತ), ಬೀದರ, ಡಯಟ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿ ವರ್ಗದವರಿಗೂ, CRP, BRP, ECO ಮತ್ತು ಶಿಕ್ಷಕ ಬಾಂಧವರಿಗೆ ಅನಂತಾನಂತ ಧನ್ಯವಾದಗಳು.

ಚಂದ್ರಕಾಂತ ತಳವಾಡೆ

assignment 1 ವರ್ಣ ರೇಖೆ

ಮಳೆ ಪದ್ಯ ವರ್ಣ ರೇಖೆ