Tuesday, July 21, 2020

ನಮ್ಮ ಶಾಲೆ ನಮ್ಮ ಹೆಮ್ಮೆ

🙏🏼🙏🏼ನಮ್ಮ ಶಾಲೆ ನಮ್ಮ ಹೆಮ್ಮೆ🙏🏼🙏🏼

👌🏼👌🏼*ಸರಕಾರಿ ಶಾಲೆ*👌🏼👌🏼

*ಇಲ್ಲಿ ಬಣ್ಣ ಬಣ್ಣದ ಕಟ್ಟಡವಿಲ್ಲ*
*ಹಳದಿ ಬಣ್ಣದ ಬಸ್ಸು ಇಲ್ಲ*
*ಬಣ್ಣಕ್ಕೊಂದು ದಿನವೂ ಇಲ್ಲ.*
*ಆದರೆ*
*ಇಲ್ಲಿ*
*ಕಲಿತ ಮಗುವಿನ ಕನಸಿನ ಬಣ್ಣ*
*ಮಾತ್ರ ಮಾಸುವುದಿಲ್ಲ.*

*ಇಲ್ಲಿ*
*ಗೇಟ್ ತೆರೆಯಲು ಅಂಕಲ್ ಇಲ್ಲ*
*ಕಸವ ಗುಡಿಸಲು ಆಂಟಿ ಬರಲ್ಲ.*
*ಊಟ ತಿನಿಸಲು ಆಯಾ ಸಿಗಲ್ಲ.*

*ಆದರೆ*
*ಇಲ್ಲಿ ಕಲಿತ ಮಗುವು ಮಾತ್ರ*
*ಒಂಟಿ ಯಾದರು*
*ಬದುಕ ಬಲ್ಲ.*

*ಇಲ್ಲಿ ಇಂಗ್ಲೀಷ್ ದೇವರಲ್ಲ.*
*ಕನ್ನಡ ಮಾತನಾಡಿದರೆ ಶಿಕ್ಷೆ ಕೊಡಲ್ಲ.*
*ಉಸಿರು ಗಟ್ಟಿಸೋ ಶಿಸ್ತು ಇಲ್ಲ.*
*ಸೂಟು ಬೂಟು ಟೈಯೂ ಇರಲ್ಲ.*
*ಆದರೆ ಇಲ್ಲಿ ಕಲಿತ*
*ಮಗುವು ಮಾತ್ರ*
*ನಾಡ ನುಡಿಯ* *ಮರೆಯುವುದಿಲ್ಲ.*

*ಶಾಲೆ ಅಂದರೆ ಕಟ್ಟಡವಲ್ಲ.*
*ಜ್ಞಾನವೆಂದರೆ ಬರೀ ಇಂಗ್ಲಿಷ್ ಅಲ್ಲ.*
*ಗೆಲುವೆಂದರೆ ದೊಡ್ಡ ಉದ್ಯೋಗ ವಲ್ಲ.*
*ಮಗುವಿನ*
*ಬದುಕಿನ ಖುಷಿಯ*
*ಮಗುವೇ*
*ಹುಡುಕುವಂತೆ*
*ಮಾಡುವುದೇ ನಿಜವಾದ ಶಿಕ್ಷಣ.ಅದುವೇ ನಮ್ಮ ಸರ್ಕಾರಿ ಶಾಲೆ*

*ಚಂದ್ರಕಾಂತ ತಳವಾಡೆ*

1 comment:

assignment 1 ವರ್ಣ ರೇಖೆ

ಮಳೆ ಪದ್ಯ ವರ್ಣ ರೇಖೆ